ಗುರುವಾರ, ಅಕ್ಟೋಬರ್ 31, 2013

ದಿನಕ್ಕೊಂದು ಸುಭಾಶಿತ

೧) ಸುಭಾಶಿತ ಮಹಿಮೆ

1}ಧರ್ಮೋ ಯಶೋ ನಯೋ ದಾಕ್ಷಂ ಮನೋಹಾರಿ ಸುಭಾಶಿತಂ |
ಇತ್ಯಾದಿಗುಣರತ್ನಾನಾಂ ಸಂಗ್ರಹಿ ನಾವಸೀದತಿ||1||

ಧರ್ಮ,ಯಶಸ್ಸು,ನೀತಿ,ದಾಕ್ಷಿಣ್ಯ ಮತ್ತು ಮನಸ್ಸನ್ನು ಅಪಹರಿಸುವಂತಹ ಸುಭಾಶಿತ ಇತ್ಯಾದಿ ಗುಣರತ್ನಗಳನ್ನು ಸಂಗ್ರಹಿಸುವವರು ಯಾವಾಗಲೂ ದುಖಕ್ಕೆ ಒಳಗಾಗುವದಿಲ್ಲ.


2}ಖಿನ್ನಂ ಚಾಪಿ ಸುಭಾಶಿತೇನ ರಮತೇ ಸ್ವೀಯಂ ಮನಃ ಸರ್ವದಾ| ಶ್ರುತ್ವಾನ್ಯಸ್ಯ ಸುಭಾಶಿತಂ ಖಲು ಮನಃ  ಶ್ರೋತುಂ ಪುನರ್ವಾಂಛತಿ| |  ಅಜ್ಞಾನ್ ಜ್ಞಾನವತೋಪ್ಯನೇನ ಹಿ ವಶೀಕರ್ತುಂ ಸಮರ್ಥೋ ಭವೇತ್| ಕರ್ತವ್ಯೋಹಿ ಸುಭಾಶಿತಸ್ಯ ಮನುಜೈರಾವಷ್ಯಕಃ ಸಂಗಹಃ|| 2|| 

ಧುಃಖದಿಂದ ಕೂಡಿದ್ದರೂ ಮನಸ್ಸು ಸುಭಾಶಿತವನ್ನು ಕೇಳಿ ನಲಿಯುತ್ತದೆ. ಬೇರೆಯವರು ಹೇಳಿದ ಸುಭಾಶಿತವನ್ನು ಕೇಳಿ ಮತ್ತೆ ಕೇಳಬೇಕೆಂದು ಹಂಬಲಿಸುತ್ತದೆ. ಮೂರ್ಖರನ್ನೂ ಪಂಡಿರನ್ನೂ ಸುಭಾಶಿತಗಳಿಂದ ವಷಪಡಿಸಿಕೊಳ್ಳುವದು ಸಾಧ್ಯ. ಆದುದರಿಂದ ಮಾನವರು ಹೇಗಾದರೂ ಸುಭಾಶಿತದ ಸಂಗ್ರಹವನ್ನು ಮಾಡಲೇ ಬೇಕು.

ಸ ಬಂಧುರ್ಯೋ ವಿಪನ್ನಾನಾಂ ಆಪದುದ್ಧರಣಕ್ಷಮಃ |
ನ ತು ದುರ್ವಿಹಿತಾತೀತವಸ್ತೂಪಾಲಂಭಪಂಡಿತಃ ||3|| ಹಿತೋಪದೇಶ, ಮಿ.ಲಾ ೨೩

ಕಷ್ಟದಲ್ಲಿ ಸಿಕ್ಕಿಹಾಕಿಕೊಂಡವರನ್ನು ಆಪತ್ತಿನಿಂದ ಉದ್ಧರಿಸಲು ಯಾರು ಸಮರ್ಥರೋ ಅವರೇ ನಿಜವಾದ ಬಂಧುಗಳು, ಸರಿಯಾಗಿ ನಿರ್ವಹಿಸದ ಅಥವಾ ಹಿಂದೆ ಸಂಭವಿಸಿದ ವಿಷಯವನ್ನು ಕುರಿತು ನಿಂದಿಸುವವನು ಬಂಧುವೇ ಅಲ್ಲ